ನಮಗೆ English ಕಠಿಣ ಆಗಲು ಕಾರಣಗಳು?
ಎಷ್ಟೋ ಜನ Spoken English ಕಲಿಯುವಾಗ Wrong method ಅನ್ನು ಬಳಸು ತ್ತಾರೆ ಸರಿ Right method ಯಾವುದೆಂದರೆ ನಾವು ಚಿಕ್ಕ ಮಗುವಾಗಿದ್ದಾಗ ಯಾವ ರೀತಿಯಾಗಿ ಭಾಷೆಯನ್ನು ಮಾತನಾಡಲು ಕಲಿಯುತ್ತೇವೆ ಅದನ್ನು Right method ಎನ್ನುತ್ತಾರೆ.ಅಂದರೆ ಸ್ನೇಹಿತರೆ ಒಂದು ಚಿಕ್ಕ ಮಗುವನ್ನು ನೋಡಿ ಅದು ಭಾಷೆಯನ್ನು ಹೇಗೆ ? ಮಾತನಾಡಲು ಕಲಿಯುತ್ತದೆ ಮೊದಲು ಅದು Listening ಅಂದರೆ ಕಿವಿಗೊಟ್ಟು ತನ್ನ ಸುತ್ತಮುತ್ತಲು ಮಾತನಾಡುವ ಶಬ್ದಗಳನ್ನು ಕೇಳಿಸಿ ಕೊಳ್ಳುತ್ತದೆ ನಂತರ, ನಂತರ ಆ ಶಬ್ದಗಳನ್ನು ಮಾತನಾಡುವ ಜನರನ್ನು Watching ಅಂದರೆ ಅವರನ್ನು ಗಮನವಿಟ್ಟು ನೋಡುತ್ತದೆ, ಅದಾದಮೇಲೆ ಅವರನ್ನು ಅನುಕರಣೆ ಮಾಡಿ ಮಾತನಾಡಲು ಪ್ರಯತ್ನಿಸುತ್ತದೆ. ಮೊದಮೊದಲು ಮಾತನಾಡುವಾಗ ತೊದಲುತ್ತದೆ, ಅದು ತಪ್ಪುತ್ತದೆ. ಆದರೂ ಸಹ ಅದು ತನ್ನ ಪ್ರಯತ್ನವನ್ನು ಬಿಡದೆ ಮಾತನಾಡಿ ಮಾತನಾಡಿ ಮುಂದೊಂದು ದಿನ ಸ್ಪಷ್ಟವಾಗಿ ಮಾತನಾಡಲು ಕಲಿಯುತ್ತದೆ.
ಇದೆ ರೀತಿಯ ಎಲ್ಲಾ English ಕಲಿಯಿರಿ Postಗಾಗಿ ಇಲ್ಲಿ 🔥🔥👉ಕ್ಲಿಕ್ ಮಾಡಿ (Click Here)👈🔥🔥
ನೋಡಿ ನಾವು ನೀವು ಸಹ ಇದೇ ರೀತಿಯಾಗಿ ಚಿಕ್ಕವರಿದ್ದಾಗ ಮಾತೃಭಾಷೆ ಕನ್ನಡವನ್ನು ಕಲಿತಿದ್ದು ಅಲ್ಲವೇ, ಸ್ನೇಹಿತರೆ ನಾವು ಚಿಕ್ಕ ಮಗುವಾಗಿದ್ದಾಗ ನಾವು ಕನ್ನಡವನ್ನು ಕಲಿಯುವ ಸಂದರ್ಭದಲ್ಲಿ ಏನಾದರೂ ಕನ್ನಡ ಸ್ಪೋಕನ್ ಕ್ಲಾಸಿಗೆ ಹೋಗಿದ್ದೆವು. ಇಲ್ಲ ತಾನೇ ಹಾಗಾದರೆ ಅದನ್ನು ಹೇಗೆ ಕಲಿತೆವು? ನೋಡಿ ಸ್ನೇಹಿತರೆ ನಾವು ಚಿಕ್ಕವರಿದ್ದಾಗ first ನಮ್ಮ ಸುತ್ತಮುತ್ತಲೂ ಮಾತನಾಡುವ ಪದಗಳನ್ನು ಕನ್ನಡ ಕೇಳಿದೆವು (listen) ಮಾಡಿಕೊಂಡೆವು ಆನಂತರ ನೋಡಿದೆವು (Watch) ಮಾಡಿದೆವು ನಂತರ ಅದನ್ನು ಮಾತನಾಡಲು ಪ್ರಯತ್ನ ಮಾಡಿ ಮಾಡಿ ನಾವು 3 ಕನ್ನಡ ಭಾಷೆಯನ್ನು ಮಾತನಾಡಲು ಕಲಿತೆವು ಆನಂತರ ನಾವು ಬೆಳೆದ ಮೇಲೆ ನಾವು ಶಾಲೆಗೆ ಹೋದ ನಂತರ ಕನ್ನಡವನ್ನು ಬರೆಯಲು ( Wrie) ಮತ್ತು ಓದಲು (Read) ಕಲಿತೆವು. ಸ್ನೇಹಿತರೆ ಇದನ್ನು Natural way of learning language ಎನ್ನುತ್ತಾರೆ. ಮುಂದುವರಿಯುವುದು
ಭಾಷೆ ಕಲಿಕೆಯ ಸ್ವಾಭಾವಿಕ ವಿಧಾನ
ಇಂಗ್ಲಿಷನ್ನು ಕಲಿಯುವಾಗ ನಾವು Natural Way (ಸ್ವಾಭಾವಿಕ ವಿಧಾನ ಬಳಸದೆ Un Natural Way ಅಸ್ವಾಭಾವಿಕ ವಿಧಾನ) ಮೂಲಕ ಕಲಿಯಲು ಅಂದರೆ ತಪ್ಪು ವಿಧಾನದದೊಂದಿಗೆ ಕಲಿತಿದ್ದೇವೆ. ಅಂದರೆ ಸ್ನೇಹಿತರೆ ನಾವು ಇಂಗ್ಲೀಷನ್ನು ಮೊದಲು Listening, Watching and Speaking ಮೂಲಕ ಕಲಿಯದೆ ನೇರವಾಗಿ ಮೊದಲು ಶಾಲೆಯಲ್ಲಿ ಇಂಗ್ಲಿಷನ್ನು ಓದಲು ಮತ್ತು ಬರೆಯಲು ಕಲಿತೆವು. ಆದರೆ, ಮಾತನಾಡಲು ಕಲಿಯಲಿಲ್ಲ. ಆದ್ದರಿಂದ ಅದು ಈಗ ನಮಗೆ ಈಗ ಇಂಗ್ಲಿಷ್‌ನಲ್ಲಿ ಮಾತನಾಡಲು ಕಠಿಣವಾಗುತ್ತಿದೆ. ಭಾಷೆಯ ಸರಾಗತೆ ನಮಗೆ ಒಲಿದಿಲ್ಲ. ಯಾವುದೇ ಪ್ರಾದೇಶಿಕ ಭಾಷೆಗಳನ್ನು ಕಲಿಯುವಷ್ಟು ಸುಲಭವಾಗಿ ನಮಗೆ ಇಂಗ್ಲಿಷನ್ನು ಕಲಿಯಲು ಆಗುತ್ತಿಲ್ಲ.ನಮ್ಮ ಸಮಸ್ಯೆ ಏನು ಎನ್ನುವುದು ಗೊತ್ತಾಯಿತು. ಮತ್ತು ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಮಸ್ಯೆಯ ಮೂಲ ಏನು ಎನ್ನುವುದನ್ನು ಸಹ ನಾವು ತಿಳಿದುಕೊಂಡೆವು ಇಂಗ್ಲಿಷ್ ಕಲಿಯಲು ಕೆಲವು ಸುಲಭ ಮಾರ್ಗಗಳನ್ನು ತಿಳಿದುಕೊಳ್ಳೋಣ.ಸ್ನೇಹಿತರೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯಲು 5 ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
1-Listening English
ಹಿಂದಿನ ಅಧ್ಯಾಯದಲ್ಲಿ ಹೇಳಿದ ಹಾಗೆ ನಾವು ಇಂಗ್ಲಿಷ್ಟಲ್ಲಿ ಮಾತನಾಡಲು ಕಲಿಯಲು ನಾವು ಅನುಸರಿಸಬೇಕಾದ First step ಯಾವುದು ಎಂದರೆ ಅದು Listening ಅಂದರೆ English ಭಾಷೆಯನ್ನು ಹೆಚ್ಚು ಕೇಳಿಸಿಕೊಳ್ಳಲು ಆರಂಭಿಸಬೇಕು ಏಕೆಂದರೆ ಯಾವುದೇ ಭಾಷೆಯನ್ನು ನಾವು ಕಲಿಯುವಾಗ Listening ತುಂಬಾ ಮುಖ್ಯವಾಗುತ್ತದೆ.ನಾವು ನಮ್ಮ ಕಿವಿಗಳ ಮೂಲಕ ಯಾವುದನ್ನು ನಾವು ನಿರಂತರವಾಗಿ ಕೇಳಿಸಿಕೊಳ್ಳುತ್ತಾ ಹೋಗುತ್ತೇವೆಯೋ ಅದು ನಮ್ಮ ಬಾಯಿಯ ಮೂಲಕ ಮಾತುಗಳ ರೂಪದಲ್ಲಿ ಹೊರಗೆ ಬರಲು ಪ್ರಾರಂಭವಾಗುತ್ತದೆ, ಆದ್ದರಿಂದ ಯಾವುದೇ ಭಾಷೆಯನ್ನು ಕಲಿಯುವಾಗ ಆ ಭಾಷೆಯನ್ನು ಕೇಳಿಸಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಯಾರಾದರೂ ಮಾತು ಬಾರದ ಮೂಕ ರನ್ನು ನೋಡಿ ಅವರು ಕಿವುಡರು ಸಹ ಆಗಿರುತ್ತಾರೆ. ಮೂಲತಹ ಅವರು ತಮ್ಮ ಕಿವಿಗಳಿಂದ ಏನನ್ನು ಕೇಳಿಸಿಕೊಳ್ಳದೆ ಇರುವುದರಿಂದ ಅವರಿಗೆ ಮಾತುಗಳು ಸಹ ಬರುವುದಿಲ್ಲ. ಆದ್ದರಿಂದ ಸ್ನೇಹಿತರೆ ಇಂಗ್ಲೀಷ್ ಅಷ್ಟೇ ಅಲ್ಲ ಯಾವುದೇ ಒಂದು ಭಾಷೆಯನ್ನು ಮಾತನಾಡಲು ಕಲಿಯಲು ಮೊದಲು ಕೇಳಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ,ಆದ್ದರಿಂದ ನಾವು Spoken English ಕಲಿಯಲು ಹೆಚ್ಚು ಹೆಚ್ಚು ಇಂಗ್ಲೀಷ್ ಪದಗಳನ್ನು ಮತ್ತು ಇಂಗ್ಲೀಷ್ ವಾಕ್ಯಗಳನ್ನು ಕೇಳಿಸಿಕೊಳ್ಳುವುದನ್ನು ನಾವು ಜಾಸ್ತಿ ಮಾಡಬೇಕು.
2-Watching English
ಇಂಗ್ಲಿಷ್ ಭಾಷೆಯನ್ನು ಮಾತನಾಡಲು ಕಲಿಯಲು ನಾವು Listening English ಜೊತೆಗೆ ಇಂಗ್ಲೀಷ್ ಭಾಷೆಯ Movies and News channels ಗಳನ್ನು ಹೆಚ್ಚು ಹೆಚ್ಚು ವೀಕ್ಷಿಸಬೇಕಾಗುತ್ತದೆ.
3. Speaking English
ಸ್ನೇಹಿತರೇ ನೀವು ಇಂಗ್ಲಿಷನ್ನು ಲಿಸನಿಂಗ್ ಮತ್ತು ವಾಚಿಂಗ್ ಮಾಡಿದ ನಂತರ ಇಂಗ್ಲಿಷ್‌ನಲ್ಲಿ ಮಾತನಾಡಲು ಪ್ರಾರಂಭಿಸ ಬೇಕು. ಚಿಕ್ಕ ಮಗು ಹೇಗೆ ಭಾಷೆಯನ್ನು ಮಾತನಾಡಲು ಆರಂಭಿಸುತ್ತದೆಯೋ ಅದೇ ರೀತಿ ನಾವು ಸಹ ಇಂಗ್ಲಿಷನ್ನು ಮಾತನಾಡಲು ಆರಂಭಿಸಬೇಕು. ಮೊದಮೊದಲು ಇಂಗ್ಲಿಷ್‌ನಲ್ಲಿ ಮಾತನಾಡುವಾಗ ನಾವು ತಪ್ಪು ಮಾಡಬಹುದು ಅದಕ್ಕೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ English ಮಾತನಾಡುವುದನ್ನು ಮುಂದುವರಿ ಸುತ್ತ ಹೋಗಬೇಕು. ನಾವು ಎಷ್ಟು ಹೆಚ್ಚುಹೆಚ್ಚು ಇಂಗ್ಲಿಷ್‌ನಲ್ಲಿ ಮಾತನಾಡುತ್ತ ಹೋಗುತ್ತೇವೆಯೋ English ಭಾಷೆ ನಮಗೆ ಸುಲಭವಾಗಿ ಮಾತ ನಾಡಲು ಬರುತ್ತದೆ. ಎಷ್ಟೋ ಜನ ಸ್ಪೋಕನ್ ಇಂಗ್ಲಿಷ್ ಕಲಿಯಲು ಅನೇಕ ಕೋರ್ಸುಗಳಿಗೆ ಸೇರುತ್ತಾರೆ, ಅನೇಕ ಪುಸ್ತಕಗಳನ್ನು ಓದುತ್ತಾರೆ ಆದರೂ ಸಹ ಅವರಿಗೆ ಮಾತನಾಡಲು ಏಕೆ ಬರುವು ದಿಲ್ಲ ಎಂದರೆ ಅವರು ಅದನ್ನು ಮಾತನಾಡುವು ದನ್ನು ಪ್ರಾಕ್ಟಿಸ್ ಮಾಡುವುದಿಲ್ಲ ಆದ್ದರಿಂದ ಅವರಿಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ನೀವು ಇಂಗ್ಲಿಷ್‌ನಲ್ಲಿ ಮಾತನಾಡಲು ಕಲಿಯುವ ಏಕೈಕ ಮಾರ್ಗ ಯಾವುದೆಂದರೆ ಮೌಖಿಕ ವಿಧಾನ. ಎಷ್ಟೋ ಜನ ನಾನು ಸಂಪೂರ್ಣವಾಗಿ ಸ್ಪೋಕನ್ ಇಂಗ್ಲಿಷ್‌ಕಲಿತ ನಂತರ ಅದರಲ್ಲಿ ಮಾತ ನಾಡುತ್ತೇನೆ ಅನ್ನುತ್ತಾರೆ ಆದರೆ ಅದು ಸಾಧ್ಯವಾಗುವುದಿಲ್ಲ. ನೀವು ಪ್ರತಿದಿನ ಸ್ವಲ್ಪ ಸ್ವಲ್ಪ ಇಂಗ್ಲಿಷ್‌ನಲ್ಲಿ ಮಾತನಾಡುತ್ತ ಹೋಗಿದ್ದೆ ಆದಲ್ಲಿ ನಿಮಗೆ ಇಂಗ್ಲೀಷ್ ಮಾತನಾಡಲು ಬರುತ್ತದೆ ಆದ್ದ ರಿಂದ ಹೆಚ್ಚು ಮಾತನಾಡಲು ಪ್ರಾರಂಭಿಸಿ.
4. Reading English
ಸ್ಪೋಕನ್ ಇಂಗ್ಲಿಷ್ ಕಲಿಯಲು ಬೇರೆ ಬೇರೆ ಪುಸ್ತಕಗಳು ಇರಬಹುದು. ಆದರೆ, ಇಂಗ್ಲಿಷ್ ವೃತ್ತಪತ್ರಿಕೆಗಳನ್ನು ಓದುವುದನ್ನು ಪ್ರಾರಂಭಿಸಬೇಕು ಏಕೆಂದರೆ English ಓದುವುದನ್ನು ಕಲಿತಾಗ ನಮಗೆ ಹೆಚ್ಚು ಹೆಚ್ಚು ಇಂಗ್ಲೀಷ್ ಶಬ್ದಗಳು ನಮ್ಮ ಅರಿವಿಗೆ ಬಂದು ಅವುಗಳು ಮಾತಿನ ರೂಪದಲ್ಲಿ ಹೊರಗೆ ಬರಲು ಆರಂಭಿಸುತ್ತವೆ.
ಇಂಗ್ಲಿಷ್ ಮಾತನಾಡುವುದನ್ನು ಕಲಿಯಲು ಮುಖ್ಯವಾಗಿ ನಾಲ್ಕು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳ ಬೇಕಾಗುತ್ತದೆ. ಅವುಗಳು ಯಾವುವೆಂದರೆ
1. Spoken Grammar
2. Spoken Translations
3. Spoken Vocabulary
4. Spoken Conversation
ಇವುಗಳನ್ನು ಒಂದೊಂದಾಗಿ ಈಗ ವಿವರವಾಗಿ ತಿಳಿದುಕೊಳ್ಳೋಣ
1. Spoken Grammar
ಇಂಗ್ಲಿಷ್‌ನಲ್ಲಿ ಮಾತನಾಡಲು Grammar ಅವಶ್ಯಕತೆ ಇಲ್ಲ ಎಂಬುದು ಕೆಲವರ ಇಂಗ್ಲಿಷ್ ವಾದ. ಹೌದು ನಾನು ಸಹ ಅದನ್ನು ಒಪ್ಪುತ್ತೇನೆ.ನಾವು ಚಿಕ್ಕವರಿದ್ದಾಗ ಯಾವ ರೀತಿಯಾಗಿ ಕನ್ನಡ ಭಾಷೆಯನ್ನು ನಾವು ಕಲಿತೆವು? ಕನ್ನಡವನ್ನು ಕಲಿಯಲು ನಾವೇನು ಅದರ ವ್ಯಾಕರಣವನ್ನು ಮೊದಲು ಕಲಿತಿದ್ದೇವಾ?... ಇಲ್ಲ. ನಮ್ಮ ಸುತ್ತಲೂ ಇರುವ ಜನರು ಮಾತನಾಡುವುದನ್ನು ಕೇಳಿಸಿಕೊಳ್ಳುವುದರ ಮೂಲಕ, ಮತ್ತು ಅದನ್ನು ನಿರಂತರವಾಗಿ ಮಾತನಾಡುವುದರ ಮೂಲಕ ನೋಡುವುದರ ಮೂಲಕ ಸ್ವಾಭಾವಿಕವಾಗಿ ಕನ್ನಡವನ್ನು ಕಲಿತಿದ್ದೇವೆ. ಅಂದರೆ ಸಹಜ, ನೈಸರ್ಗಿಕ ವಿಧಾನದ ಮೂಲಕ ಕನ್ನಡ ಭಾಷೆಯನ್ನು ಕಲಿತೆವು. ಆದರೆ, ಈಗ ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ಕಲಿಯಲು ನಮ್ಮ ಸುತ್ತಲೂ ಇಂಗ್ಲಿಷ್ ಮಾತನಾಡುವ ಜನರು ಇಲ್ಲದ ಪರಿಸರದಲ್ಲಿ ನಾವು ಇರುವುದರಿಂದ ಇಂಗ್ಲಿಷ್ ಕಲಿಯಲು ಸಹಜವಾಗಿ ನಮಗೆ English Grammar otva ಅವಶ್ಯಕತೆ ಇದೆ. What is the Grammar? Set of rules and regulations of any language is called Grammar, ಅಂದರೆ ಯಾವುದೇ ಭಾಷೆಗೂ ಅದರದ್ದೇ ಆದಂಥ ನಿಯಮಗಳು ಇರುತ್ತವೆ. ನಾವು ಆ ನಿಯಮಗಳನ್ನು ತಿಳಿದುಕೊಳ್ಳುವುದರಿಂದ ಸರಿಯಾಗಿ ಮಾತನಾಡಲು ಕಲಿಯಬಹುದು. ಹಾಗೆಯೇ ಇಂಗ್ಲಿಷ್‌ನಲ್ಲಿ ಮಾತನಾಡಲು ನಾವು ಇಂಗ್ಲಿಷ್ ಭಾಷೆಯ ನಿಯಮಗಳನ್ನು ಕಲಿಯಬೇಕು. ನಾವು ಕನ್ನಡ ಮಾತನಾಡಿದ ಹಾಗೆಯೇ ಇಂಗ್ಲಿಷ್‌ನಲ್ಲಿ ಮಾತನಾಡಲೂ ಆಗುವುದಿಲ್ಲ ಇಂಗ್ಲಿಷ್‌ಗೆ ಅದರದ್ದೇ ಆದ ನಿಯಮಗಳು ಬೇರೆ ಇರುತ್ತವೆ. ಉದಾಹರಣೆಗೆ ನಾವು ಕನ್ನಡ ವಾಕ್ಯ ರಚನೆ ಮಾಡುವಾಗ ಕರ್ತೃವಿನ ನಂತರ ಕರ್ಮ ಪದವನ್ನು ಹಾಕಿ ಕೊನೆಗೆ ಕ್ರಿಯಾಪದವನ್ನು ಹಾಕುತ್ತೇವೆ. ಆದರೆ, ಇಂಗ್ಲಿಷ್‌ನಲ್ಲಿ Subject ನಂತರ ಕ್ರಿಯಾಪದವನ್ನು ಹಾಕಿ ಕೊನೆಗೆ ಕರ್ಮ ಪದವನ್ನು ಹಾಕುತ್ತಾರೆ ಈಗ ನೋಡಿ ನಾನು ಶಾಲೆಗೆ ಹೋಗುತ್ತೇನೆ ಇದರಲ್ಲಿ ಕರ್ತೃವಿನ ನಂತರ ಕರ್ಮಪದವನ್ನು ನಾವು ಬರೆಯುತ್ತೇವೆ, ಆದರೆ ಇದೇ ವಾಕ್ಯವನ್ನು ಇಂಗ್ಲಿಷ್‌ನಲ್ಲಿ ರಚನೆ ಮಾಡುವಾಗ I go to school ಇಲ್ಲಿ Go ಅನ್ನುವ ಕ್ರಿಯಾಪದವನ್ನು ಬರೆದನಂತರ to school ಅನ್ನುವ ಕರ್ಮ ಪದವನ್ನು ಬರೆಯುತ್ತೇವೆ.ಈ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳಲು ಇಂಗ್ಲಿಷ್ ಗ್ರಾಮರ್‌ಅನ್ನು ಕಲಿಯುವ ಅವಶ್ಯಕತೆ ತುಂಬಾ ಇದೆ.English Grammar von ode ನಾವೇನು ಆಳವಾದ Grammar ಕಲಿಯುವ ಅವಶ್ಯಕತೆ ಇಲ್ಲ. ಆದರೆ, ಇಂಗ್ಲಿಷ್ ಭಾಷೆಯನ್ನು ಮಾತನಾಡಲು ಎಷ್ಟು ಬೇಕೋ ಅಷ್ಟು ಇಂಗ್ಲಿಷ್ ಗ್ರಾಮರ್ ಅನ್ನು ಕಲಿತರೆ ಸಾಕು. ಅದಕ್ಕೆ ನಾನು ನಿಮಗೆ Spoken Grammar ಅನ್ನು ಕಲಿಸುತ್ತೇನೆ.
2- Spoken Translations
Spoken English Footwen Translations ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತವೆ. ಹಿಂದೆ ಗ್ರಾಮರ್ ಇಲ್ಲದೆ ಕೇವಲ Translations ಮುಖಾಂತರ ತುಂಬಾ ಜನ ಇಂಗಿಷನ್ನು ಸುಲಭವಾಗಿ ಮಾತನಾಡಲು ಕಲಿಯುತ್ತಿದ್ದರು. ನಾನು ಚಿಕ್ಕವನಿದ್ದಾಗ ಇಂಗ್ಲಿಷ್ ಭಾಷಾಂತರ ಪಾಠಮಾಲೆಗಳ ಸರಣಿ ಪುಸ್ತಕಗಳು ಬರುತ್ತಿದ್ದವು. ಅವುಗಳಿಂದ ನಾನು ಇಂಗ್ಲಿಷನ್ನು ಸುಲಭವಾಗಿ ಕಲಿಯುತ್ತಿದ್ದೆ. ಅದೇ ರೀತಿ ಬೇರೆ ಬೇರೆ Translations ಗಳನ್ನು ಕನ್ನಡದಿಂದ ಇಂಗ್ಲಿಷ್‌ನಲ್ಲಿ ಹೇಗೆ ಮಾಡಬಹುದು ಎನ್ನುವುದನ್ನು ಮುಂದೆ ಕಲಿಯಲಿದ್ದೀರಿ.
3&Spoken Vocabulary
ಇಂಗ್ಲಿಷ್‌ನಲ್ಲಿ ಮಾತನಾಡಲು ನಮಗೆ ಇಂಗ್ಲಿಷ್ ಶಬ್ದಗಳು ತುಂಬಾ ಮುಖ್ಯವಾಗಿವೆ. ಕನ್ನಡದಲ್ಲಿ ಸುಲಭವಾಗಿ, ಸುಲಲಿತವಾಗಿ ಮತ್ತು ತಡೆರಹಿತವಾಗಿ ಸ್ಪಷ್ಟವಾಗಿ ಮಾತನಾಡಲು ಕಾರಣ ನಮ್ಮ ಮಿದುಳಿನಲ್ಲಿರುವ ಶಬ್ದಸಂಗ್ರಹ. ಅದೇ ರೀತಿಯಾಗಿ ನಾವು ಇಂಗ್ಲಿಷ್ ನಲ್ಲಿ ಸುಲಭವಾಗಿ ಮಾತನಾಡಲು ಕಲಿಯಲು ಇಂಗ್ಲಿಷ್ ಶಬ್ದಗಳನ್ನು ಹೆಚ್ಚು ಹೆಚ್ಚು ನಮ್ಮ ಮಿದುಳಿನಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ನಾವು ಎಷ್ಟು ಶಬ್ದಗಳನ್ನು ಜಾಸ್ತಿ ಸಂಗ್ರಹ ಮಾಡಿಕೊಳ್ಳುತ್ತೇವೆ. ಅಷ್ಟು ಸುಲಭವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಲು ಕಲಿಯುತ್ತೇವೆ.ಹಾಗಿದ್ದರೆ, ಇಂಗ್ಲಿಷ್‌ನಲ್ಲಿ ಮಾತನಾಡಲು ನಾವು ಎಷ್ಟು ಶಬ್ದಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. Basic English Words and Advanced English Words ಎಂದು ಎರಡು ರೀತಿಯಾದ ಶಬ್ದಗಳನ್ನು ವಿಂಗಡಿಸಬಹುದು. ಸುಲಭವಾಗಿ ಇಂಗ್ಲಿಷ್ ನಲ್ಲಿ ಮಾತನಾಡಲು ಮೊದಲು Basic ಇಂಗ್ಲಿಷ್ Words ಗಳನ್ನು ಕಲಿಯ ಬೇಕಾಗುತ್ತದೆ. ಅಂದರೆ ನಾವು ದಿನನಿತ್ಯದ ಸಂಭಾಷಣೆಯಲ್ಲಿ ನಮಗೆ ಯಾವ ರೀತಿಯಾದ ಶಬ್ದಗಳ ಅವಶ್ಯಕತೆ ಇರುತ್ತೋ ಅಂತಹ ಶಬ್ದಗಳನ್ನು ಇಲ್ಲಿ ಹೇಳಿಕೊಡಲಾಗುತ್ತದೆ
4-Spoken Conversation Conversation
ಅಂದರೆ ಸಂಭಾಷಣೆ. ನಾವು ಇಂಗ್ಲಿಷ್‌ನಲ್ಲಿ ಮಾತನಾಡುವಾಗ ಸಾಂದರ್ಭಿಕವಾಗಿ ಯಾವ ಸಂದರ್ಭಗಳಲ್ಲಿ ಹೇಗೆ ಮಾತನಾಡಬೇಕು ಅನ್ನುವುದನ್ನು Spoken Conversations ಮುಖಾಂತರ ಸುಲಭವಾಗಿ ಕಲಿಯಬಹುದು. ಈ ವಿಭಾಗದಲ್ಲಿ ನಾನು ನಿಮಗೆ ಅನೇಕ ಸಾಂದರ್ಭಿಕ Conversations ಗಳನ್ನು ಕಲಿಯಲಿದ್ದೀರಿ. ಉದಾಹರಣೆಗೆ ಬ್ಯಾಂಕಿಗೆ ಹೋದಾಗ, ಸಂದರ್ಶನ ಎದುರಿಸುವಾಗ ಇರಬಹುದು ಅಥವಾ ಬೇರೆಯವರೊಡನೆ ನೀವು ಮಾತನಾಡುವಾಗ ಯಾವ ರೀತಿ ಸುಲಭವಾಗಿ ಮಾತನಾಡಬಹುದು ಎನ್ನುವುದನ್ನು Spoken Conversations ಮುಖಾಂತರ ಕಲಿಯಬಹುದು. ಇವುಗಳ ಜತೆಗೆ ಇನ್ನೂ ಚೆನ್ನಾಗಿ ಇಂಗ್ಲಿಷ್‌ನಲ್ಲಿ ಮಾತನಾಡಲು ನಾವು ಮಾಡಬೇಕಾದ ಮುಖ್ಯವಾದ ಕೆಲಸವೆಂದರೆ Spoken Practice. ಅಂದರೆ ನಾವು ಏನನ್ನು ಕಲಿಯುತ್ತೇವೆ ಅದನ್ನು ನಿರಂತರವಾಗಿ Practice ಮಾಡುತ್ತ ಹೋಗಬೇಕು. ಎಷ್ಟು ಜನ ಇಂಗ್ಲಿಷ್ ಗ್ರಾಮರ್‌ಅನ್ನು ಚೆನ್ನಾಗಿ ಕಲಿಯುತ್ತಾರೆ. ಅದರಿಂದ ಅವರಿಗೆ ಇಂಗ್ಲಿಷ್ ಓದಲು ಮತ್ತು ಬರೆಯಲು ಚೆನ್ನಾಗಿ ಬರುತ್ತದೆ. ಆದರೆ, ಮಾತನಾಡಲು ಬರುವುದಿಲ್ಲ. ಏಕೆಂದರೆ, ಕೇವಲ ಕಲಿಯುವುದಷ್ಟೇ ಮುಖ್ಯ ಅಲ್ಲ. ಅದನ್ನು ನಿರಂತರವಾಗಿ ಪ್ರಾಕ್ಟಿಸ್ ಮಾಡುವುದು ತುಂಬಾ ಮುಖ್ಯವಾಗುತ್ತದೆ.
Meeting Greetings
ನಾವು ಇತರರನ್ನು ಎದುರುಗೊಂಡಾಗ ಅಥವಾ ಮಾತನಾಡುವಾಗ ಇತರರಿಗೆ ನಮಸ್ಕಾರ, ನಮಸ್ತೆ ಎಂದು ಹೇಳುತ್ತೇವೆ. ಅದೇ ರೀತಿ ಇಂಗ್ಲಿಷ್‌ನಲ್ಲಿ ನಮಸ್ಕಾರ ಅಥವಾ ಶುಭ ಕೋರಲು ಬೇರೆಬೇರೆ ವೇಳೆಯಲ್ಲಿ ಬೇರೆ ಬೇರೆ ಶಬ್ದಗಳನ್ನು ಬಳಸುತ್ತಾರೆ.
Meeting Greetings -
(ಅಂದರೆ ಭೇಟಿಯಾದಾಗ ಎಂದು ಅರ್ಥ.)
1-Good Morning:
ಮುಂಜಾನೆಯ ನಮಸ್ಕಾರಗಳು ಇದನ್ನು ಸಾಮಾನ್ಯವಾಗಿ ಬೆಳಗ್ಗೆ ಎದ್ದಾಗಿನಿಂದ ಮಧ್ಯಾಹ್ನ 12ಗಂಟೆಯವರೆಗೆ ಬಳಸುತ್ತಾರೆ.
2-Good afternoon:
ಮಧ್ಯಾಹ್ನದ ನಮಸ್ಕಾರಗಳು ಇದನ್ನು ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಳಸುತ್ತಾರೆ.
3-Good Evening:
ಸಂಜೆಯ ನಮಸ್ಕಾರಗಳುಇದನ್ನು ಸಾಯಂಕಾಲ ಐದು ಗಂಟೆಯ ನಂತರ ನಾವು ಬಳಸುತ್ತೇವೆ.
4-Hi and Hello:
ಇವೆರಡೂ ಶಬ್ದಗಳ ಅರ್ಥ ನಮಸ್ಕಾರ ಎಂದು ಆಗುತ್ತದೆ. ಇವುಗಳನ್ನು ನೀವು ದಿನದ ಯಾವುದೇ ಸಮಯದಲ್ಲೂ ಸಹ ಬಳಸಬಹುದು. ಆದರೆ ನೆನಪಿನಲ್ಲಿಟ್ಟುಕೊಳ್ಳಿ
Hi ಎನ್ನುವುದನ್ನು ನಮಗಿಂತಲೂ ಚಿಕ್ಕವರು ಮತ್ತು ನಮ್ಮ ಸ್ನೇಹಿತರಿಗೆ ಮಾತ್ರ ನಾವು ಬಳಸಬಹುದು. Hello ಎನ್ನುವುದನ್ನು ನಮಗಿಂತಲೂ ದೊಡ್ಡವರು ಮತ್ತು ನಮಗಿಂತಲೂ ಉನ್ನತ ಸ್ಥಾನದಲ್ಲಿ ಇರುವವರಿಗೆ ಬಳಸಬೇಕಾಗುತ್ತದೆ.
5-Nice to see you:
ನಿಮ್ಮನ್ನು ನೋಡಿ ನನಗೆ ಸಂತೋಷವಾಯಿತು. ಈ ವಾಕ್ಯವನ್ನು ನಾವು ಯಾರನ್ನಾದರೂ ಭೇಟಿಯಾಗಿ ಸಂತೋಷವಾದಾಗ ಬಳಸಬಹುದು.
Parting Greetings:
(ಅಂದರೆ ಯಾರನ್ನಾದರೂ ಭೇಟಿಯಾಗಿ ನಾವು ಬೀಳ್ಕೊಡುವಾಗ ಮಾತನಾಡುವ ಶಬ್ದಗಳು)
1-Bye: ಹೋಗಿ ಬನ್ನಿ
2-Bye, Bye, :ಹೋಗಿ ಬನ್ನಿ
3-Good bye: ಸರಿ ಇನ್ನು ಹೋಗಿ ಬನ್ನಿ
Meeting Greetings
ಸಾಮಾನ್ಯವಾಗಿ ಯಾರನ್ನಾದರೂ ಭೇಟಿಯಾಗಿ ನಾವು ಹೋಗುವಾಗ Bye ಎಂದು ನಾವು ಹೇಳುತ್ತೇವೆ. ಆದರೆ ಆ ವ್ಯಕ್ತಿಗಳು ನಮ್ಮನ್ನು ಬಿಟ್ಟು ದೀರ್ಘಕಾಲದವರೆಗೆ ಹೋಗುತ್ತಿದ್ದಾರೆ ಎಂದರೆ (Good bye ಎಂದು ಹೇಳಬೇಕಾಗುತ್ತದೆ.
4- See you later: ನಿಮ್ಮನ್ನು ಆಮೇಲೆ ಭೇಟಿಯಾಗುತ್ತೇನೆ.
5-Bye see you: ಒಳ್ಳೆಯದು ಮತ್ತೊಮ್ಮೆ ಭೇಟಿಯಾಗೋಣ.
G-Good night:
ಶುಭರಾತ್ರಿ ಒಳ್ಳೆಯದಾಗಲಿ ಹೋಗಿಬನ್ನಿ, ಸ್ನೇಹಿತರೆ ನೆನಪಿನಲ್ಲಿಟ್ಟುಕೊಳ್ಳಿ Good night ಎನ್ನುವುದನ್ನ ನಾವು ಯಾರನ್ನಾದರೂ ರಾತ್ರಿ ಭೇಟಿಯಾಗಿ ಬೀಳ್ಕೊಡುವಾಗ ಉಪಯೋಗಿಸಬೇಕು. ಆದರೆ ಎಷ್ಟೋ ಜನ ರಾತ್ರಿ ಯಾರನ್ನಾದರೂ ಭೇಟಿಯಾದಾಗ ಮೊದಲೇ Good night ಎಂದು ಅವರನ್ನು ಸಂಭೋಧಿಸುತ್ತಾರೆ. ಆದರೆ ಇದು ತಪ್ಪಾಗುತ್ತದೆ. ಗುಡ್ ನೈಟ್ ಎನ್ನುವುದನ್ನು ಭೇಟಿಯಾಗಿ ಹೋಗಬೇಕಾದರೆ ಮಾತ್ರ ಉಪಯೋಗಿಸಬೇಕು. ನೀವು ರಾತ್ರಿ ಯಾರನ್ನಾದರೂ ಭೇಟಿಯಾದಾಗ ಅವರಿಗೆ Good evening ಎಂದು ಸಂಬೋಧನೆ ಮಾಡಬೇಕು. ರಾತ್ರಿ ಆದರೂ ಸಹ ನಾವು Good evening ಎನ್ನುವುದನ್ನು ಉಪಯೋಗಿಸಬಹುದು.
ಇತ್ತೀಚಿನ ಯುವಪೀಳಿಗೆ
Hi bro
Hey bro
Hi dude
Hi man
Hey what's up
ಈ ರೀತಿಯಾಗಿ ಸಂಬೋಧಿಸುತ್ತಾರೆ. ಆದರೆ, ಈ ತರಹದ ವಾಕ್ಯಗಳನ್ನು ನಾವು ಇನ್ಸಾರ್ಮಲ್ ಗ್ರೀಟಿಂಗ್ಸ್ ಎಂದು ಕರೆಯುತ್ತೇವೆ. ಮುಂದಿನ ಅಧ್ಯಾಯದಲ್ಲಿ ನಾವು ಸ್ಪೋಕನ್ ಗ್ರಾಮರ್‌ನಲ್ಲಿ ತುಂಬಾ ಮುಖ್ಯವಾದ ಇಂಗ್ಲಿಷ್ ಮೂಲಾಕ್ಷರಗಳನ್ನು ಮತ್ತು ಅವುಗಳ ಸರಿಯಾದ ಉಚ್ಚಾರಣೆಯನ್ನು ಕಲಿಯೋಣ.
ಇಂಗ್ಲಿಷ್ ಮೂಲಾಕ್ಷರಗಳು ಉಚ್ಚಾರಣೆ
ಕನ್ನಡ ಭಾಷೆಯಲ್ಲಿ 49 ಮೂಲಾಕ್ಷರಗಳು ಇರುವಂತೆ ಇಂಗ್ಲಿಷ್‌ನಲ್ಲಿ 26 ಅಕ್ಷರಗಳಿವೆ ಅವುಗಳನ್ನು ನಾವು ಅಲ್ಪಬೇಟ್ ಎಂದು ಕರೆಯುತ್ತೇವೆ. ಅವುಗಳನ್ನು ಎರಡೂ ರೀತಿಯಲ್ಲಿ ವರ್ಗೀಕರಿಸುತ್ತಾರೆ
1-Vowels (on):-A.E.I.O.U ಈ ರೀತಿಯ ಐದು ಸ್ವರಗಳಿವೆ
2-Consonants(ವ್ಯಂಜನಗಳು):-B.C.D.F.G.H.J.K.L.M.N.P.Q.R.S.T.V.W.X.Y.Z ಈ ರೀತಿ 21 ವ್ಯಂಜನಗಳಿವೆ.
English Pronunciation ಇಂಗ್ಲಿಷ್ ಉಚ್ಚಾರಣೆ
ಜನರು ಕೆಲವೊಮ್ಮೆ ಇಂಗ್ಲಿಷ್‌ನಲ್ಲಿ ಮಾತನಾಡುವಾಗ ತಪ್ಪುತಪ್ಪಾಗಿ ಉಚ್ಚಾರಣೆ ಮಾಡುತ್ತಿರುತ್ತಾರೆ ಇದಕ್ಕೆ ಮುಖ್ಯ ಕಾರಣ ಅವರು ಇಂಗ್ಲಿಷ್ ಅಕ್ಷರಗಳ ಸರಿಯಾದ ಉಚ್ಚಾರಣೆಯನ್ನು ಕಲಿಯದಿರುವುದೇ ಆಗಿದೆ. ಇಂಗ್ಲಿಷ್‌ನಲ್ಲಿ ಸರಿಯಾಗಿ ಓದಲು ಮತ್ತು ಬರೆಯಲು ಹಾಗೂ ಸರಿಯಾಗಿ ಮಾತನಾಡಲು English Pronunciation (ಇಂಗ್ಲಿಷ್ ಉಚ್ಚಾರಣೆ) ಕಲಿಯು ವುದು ತುಂಬಾ ಅಗತ್ಯವಾಗಿದೆ. ಇಂಗ್ಲಿಷ್ ಅಕ್ಷರಗಳ ಸರಿಯಾದ ಉಚ್ಚಾರಣೆಯನ್ನು ಕಲಿಯೋಣ.
A-ಇದು ಕನ್ನಡದಲ್ಲಿ ಅ, ಆ ಉಚ್ಚಾರಣೆ ಆಗುತ್ತದೆ.
Ex- Apple- ಸೇಬುಹಣ್ಣು
All : ಎಲ್ಲರೂ
Anuradha-ಅನುರಾಧ
B - ಇದು ಕನ್ನಡದಲ್ಲಿ ಬ ಉಚ್ಚಾರಣೆ ಆಗುತ್ತದೆ.
Ex-Banana-ಬಾಳೆಹಣ್ಣುB
Bus- ಬಸ್
C - ಇದು ಕನ್ನಡದಲ್ಲಿ ಸ ಮತ್ತು ಕ ಉಚ್ಚಾರಣೆ ಆಗುತ್ತದೆ.
ಬಳಿಕ E,I Y ಅಕ್ಷರಗಳು ಬಂದರೆ C ಉಚ್ಚಾರಣಿ ಸ ಎಂದು ಆಗುತ್ತದೆ.
Ex-Cyclone- ಚಂಡಮಾರುತ
Certificate- ಪ್ರಮಾಣಪತ್ರ
Cinema- ಚಲನಚಿತ್ರ
D - ಇದರ ಉಚ್ಚಾರಣೆ ಕನ್ನಡದಲ್ಲಿ ದ ಮತ್ತು ಡ ಎಂದು ಆಗುತ್ತದೆ.
Ex:-Daddy- ತಂದೆ
Dear- ಪ್ರೀತಿಯ
Dharawad-ಧಾರವಾಡ
E-ಇದರ ಉಚ್ಚಾರಣೆ ಕನ್ನಡದಲ್ಲಿ G,C, ಮತ್ತು D ಎಂದು ಆಗುತ್ತದೆ.
Ex:- Elephant-ಆನೆ
Engineer-ಇಂಜಿನಿಯರ್
Eagle-ಗರುಡ
E - ಉಚ್ಚಾರಣೆ ಕೆಲವು ಸಮಯದಲ್ಲಿ A ಮತ್ತು I ಎಂದು ಸಹ ಉಚ್ಚಾರಣೆ ಆಗುತ್ತದೆ.
Ex-Eye-ಕಣ್ಣು
Earth-ಭೂಮಿ.
F-ಇದರ ಉಚ್ಚಾರಣೆ ಕನ್ನಡದಲ್ಲಿ ಫ ಎಂದು ಆಗುತ್ತದೆ
Ex-Fish-ಮೀನು
Flower-ಹೂವು
Fruit-ಹಣ್ಣು
G-ಇದರ ಉಚ್ಚಾರಣೆ ಕನ್ನಡದಲ್ಲಿ ಗ ಮತ್ತು ಜ ಎಂದು ಆಗುತ್ತದೆ.
Ex-Goat-ಮೇಕೆ
Girl-ಹುಡುಗಿ
Giraffe : ಜಿರಾಫೆ
H-ಇದರ ಉಚ್ಚಾರಣೆ ಕನ್ನಡದಲ್ಲಿ ಹ ಎಂದು ಆಗುತ್ತದೆ Ex:-Hammer-3
Honey- ಜೇನುತುಪ್ಪ
Horse-ಕುದುರೆ
I-ಇದರ ಉಚ್ಚಾರಣೆ ಕನ್ನಡದಲ್ಲಿ ಈ ಮತ್ತು ಐ ಎಂದು ಆಗುತ್ತದೆ.
Ex:- Ice&cream- ಐಸ್ಕ್ರೀಮ್
Insect-ಹುಳು
India- ಭಾರತ
J-ಇದರ ಉಚ್ಚಾರಣೆ ಕನ್ನಡದಲ್ಲಿ ಈ ಜ ಆಗುತ್ತದೆ.
Ex-Jackal- ನರಿ
Jaguar-ಚಿರತೆ
Jam- ಹಣ್ಣಿನಪಾಕ
K-ಇದರ ಉಚ್ಚಾರಣೆ ಕನ್ನಡದಲ್ಲಿ ಕ ಆಗುತ್ತದೆ.
Ex- Kite-ಗಾಳಿಪಟ
King- ರಾಜ
Kind-ದಯಾಳು
L-ಇದರ ಉಚ್ಚಾರಣೆ ಕನ್ನಡದಲ್ಲಿ ಲ ಆಗುತ್ತದೆ.
Ex-Ladder-ಏಣಿ
Lamb-ಕುರಿಮರಿ
Leaf- ಎಲೆ
M-ಇದರ ಉಚ್ಚಾರಣೆ ಕನ್ನಡದಲ್ಲಿ ಮ ಆಗುತ್ತದೆ.
Ex-Milk- ಹಾಲು
Monkey-ಕೋತಿ
Moon- ಚಂದ್ರ
N- ಇದರ ಉಚ್ಚಾರಣೆ ಕನ್ನಡದಲ್ಲಿ ನ ಆಗುತ್ತದೆ.
Ex-Neck-ಕುತ್ತಿಗೆ
Nose-ಮೂಗು
Needle-ಸೂಜಿ
O-ಇದರ ಉಚ್ಚಾರಣೆ ಕನ್ನಡದಲ್ಲಿ ಅ, ಒ, ಊ, ಮತ್ತು ಅ ಎಂದು ಉಚ್ಚರಿಸಲಾಗುತ್ತದೆ.
Ex- Onion-ಈರುಳ್ಳಿ
Ox : ಎತ್ತು
Old-ಹಳೆಯ
Our-ನಮ್ಮ
P- ಇದರ ಉಚ್ಚಾರಣೆ ಕನ್ನಡದಲ್ಲಿ ಪ ಆಗುತ್ತದೆ.
Ex- Peacock- ನವಿಲು
Pillow-ದಿಂಬು
Potato-ಆಲೂಗಡ್ಡೆ
Q-ಇದರ ಉಚ್ಚಾರಣೆ ಕನ್ನಡದಲ್ಲಿ ಕ್ಯೂ ಕಲಿಕೆಯ
ಹಂತಗಳು ಆಗುತ್ತದೆ.
Ex-Queen-ರಾಣಿ
Quarter-ಕಾಲು ಭಾಗ
ನೆನಪಿನಲ್ಲಿಟ್ಟುಕೊಳ್ಳಿ Q ಅಕ್ಷರವನ್ನು ಉಪಯೋಗಿಸಿಕೊಂಡು ಪದಗಳನ್ನು ಮಾಡುವಾಗ ಜತೆಗೆ U ಅಕ್ಷರ ಯಾವಾಗಲೂ ಉಪಯೋಗಿಸಲಾಗುತ್ತದೆ.
R-ಇದರ ಉಚ್ಚಾರಣೆ ಕನ್ನಡದಲ್ಲಿ ರಆಗುತ್ತದೆ.
Ex-Rose-ಗುಲಾಬಿ
Raddish- ಮೂಲಂಗಿ
Rabbit- ಮೋಲ
S-ಇದರ ಉಚ್ಚಾರಣೆ ಕನ್ನಡದಲ್ಲಿ ಸ ಆಗುತ್ತದೆ.
Ex-Sand-ಉಸುಕು
Silver-ಬೆಳ್ಳಿ
Skin : ಚರ್ಮ
T:- ಇದರ ಉಚ್ಚಾರಣೆ ಕನ್ನಡದಲ್ಲಿ ಟ ಮತ್ತು ತ ಎಂದು ಆಗುತ್ತದೆ.
Ex-Teak - ತೇಗದ ಮರ
Thorn-ಮುಳ್ಳು
Tamarind- ಹುಣಸೆಹಣ್ಣು
U- ಇದರ ಉಚ್ಚಾರಣೆ ಕನ್ನಡದಲ್ಲಿ ಅ, ಉ ಮತ್ತು ಯ ಎಂದು ಆಗುತ್ತದೆ. Ex-Umbrella-o Uniform-ಸಮವಸ್ತ್ರ Up-ಮೇಲೆ V-ಇದರ ಉಚ್ಚಾರಣೆ ಕನ್ನಡದಲ್ಲಿ ವ ಆಗುತ್ತದೆ.
Ex-Violin-ren
Vegetable-ತರಕಾರಿ
Vase-ಹೂಕುಂಡ
W-ಇದರ ಉಚ್ಚಾರಣೆ ಸಹ ಕನ್ನಡದಲ್ಲಿ ವ ಎಂದು ಆಗುತ್ತದೆ.
Ex-Water- ನೀರು
Wave- ಅಲೆ ಅಥವಾ ತರಂಗಗಳು
Watch-ಗಡಿಯಾರ
X-ಇದರ ಉಚ್ಚಾರಣೆ ಕನ್ನಡದಲ್ಲಿ ಮತ್ತು ಕ್ಷ ಮತ್ತು ಝ ಎಂದು ಆಗುತ್ತದೆ.
Ex- X-mas-ಕ್ರಿಸ್ಮಸ್
Xerox-ಝರಾಕ್ಸ್
Y-ಇದರ ಉಚ್ಚಾರಣೆ ಕನ್ನಡದಲ್ಲಿ ಯ ಮತ್ತು ಇ ಎಂದು ಆಗುತ್ತದೆ.
Ex- Yellow-ಹಳದಿ
Youth-ಯವ್ವನ
Yard-ಅಂಗಳ
Year-ವರ್ಷ
Z- ಇದರ ಉಚ್ಚಾರಣೆ ಕನ್ನಡದಲ್ಲಿ ಝ ಎಂದು ಆಗುತ್ತದೆ.
Ex- Zebra- ಹೆಸರಗತ್ತೆ
Zoo-ಮೃಗಾಲಯ
Zink - ಸತು
ಇಂಗ್ಲಿಷ್ ಭಾಷೆಯಲ್ಲಿ ಸರಿಯಾಗಿ ಮಾತನಾಡಬೇಕೆಂದರೆ ಅದರ ಸರಿಯಾದ ಉಚ್ಚಾರಣೆಯನ್ನು ಕಲಿಯುವುದು ತುಂಬಾ ಅವಶ್ಯಕ ಇದೆ.ನಾನು ಇಲ್ಲಿ ಕೆಲವು ಉದಾಹರಣೆಗಳೊಂದಿಗೆ ಮಾತ್ರ ಅವುಗಳನ್ನು ಇಲ್ಲಿ ಹೆಸರಿಸಿದ್ದೇನೆ ನೀವು ನಿಮ್ಮದೇ ಆದ ಸ್ವಪ್ರಯತ್ನದೊಂದಿಗೆ ಗೂಗಲ್‌ನಲ್ಲಿ ಶಬ್ದಗಳನ್ನು ಟೈಪ್ ಮಾಡಿ ಅವುಗಳ ಸರಿಯಾದ ಉಚ್ಚಾರಣೆಯನ್ನು ತಿಳಿದುಕೊಳ್ಳಬೇಕು ಮತ್ತು ಅದನ್ನು ನಿರಂತರವಾಗಿ ರೂಢಿ ಮಾಡಿಕೊಂಡು ನಿಮ್ಮ ದಿನನಿತ್ಯದ ವೇಳೆಯಲ್ಲಿ ಈ ಶಬ್ದಗಳನ್ನು ಪ್ರಯೋಗಿಸುವುದನ್ನು ಕಲಿತುಕೊಳ್ಳಿ. ಮತ್ತೊಂದು ಹೊಸ ಅಧ್ಯಾಯದೊಂದಿಗೆ ನಾಳೆ ಭೇಟಿಯಾಗೋಣ.


















